ಡಿಸೆಂಬರ್ ೨೧ - ಡಿಸೆಂಬರ್ ತಿಂಗಳಿನ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೫ನೇ (ಅಧಿಕ ವರ್ಷದಲ್ಲಿ ೩೫೬ನೇ) ದಿನ. ಸಾಮಾನ್ಯವಾಗಿ ಈ ದಿನ ಉತ್ತರ ಭೂಗೋಳಾರ್ಧದಲ್ಲಿ ಚಳಿಗಾಲದ ಪ್ರಾರಂಭ ಮತ್ತು ದಕ್ಷಿಣ ಭೂಗೋಳಾರ್ಧದಲ್ಲಿ ವಸಂತದ ಅಂತ್ಯೆ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೬೯ - ವೆಸ್ಪಾಸಿಯನ್ ಇದೇ ವರ್ಷದ ನಾಲ್ಕನೇ ರೋಮ್‍ನ ಚಕ್ರವರ್ತಿ ಆಗಿ, ಈ ವರ್ಷ ಇತಿಹಾಸದಲ್ಲಿ ನಾಲ್ಕು ಚಕ್ರವರ್ತಿಗಳ ವರ್ಷ ಎಂದು ಹೆಸರಾಯಿತು. ೧೯೫೮ - ಚಾರ್ಲ್ಸ್ ದೆ ಗೌಲ್, ಫ್ರಾನ್ಸ್ನ ರಾಷ್ಟ್ರಪತಿಯಾಗಿ ಚುನಾಯಿತರಾದರು. ೧೯೭೧ - ಕರ್ಟ್ ವಾಲ್ಡ್‍ಹೈಮ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಆಯ್ಕೆಯಾದರು. ೧೯೮೮ - ಭಯೋತ್ಪಾದಕರ ಬಾಂಬ್ ವಿಸ್ಫೋಟದಲ್ಲಿ ಪಾನ್ ಆಮ್ ೧೦೩ ವಿಮಾನ ಸ್ಕಾಟ್ಲೆಂಡ್ನ ಲಾಕರ್ಬಿ ಮೇಲೆ ಧ್ವಂಸಗೊಂಡು ೨೭೦ ಜನ ಸಾವನ್ನಪ್ಪಿದರು. == ಜನನ == ೧೮೮೧ - ಪಂಡಿತ್ ಸುಂದರ್ ಲಾಲ್ ಶರ್ಮಾ, ಸ್ವಾತಂತ್ರ್ಯ ಹೋರಾಟಗಾರ ೧೯೧೮ - ಕರ್ಟ್ ವಾಲ್ಡ್‍ಹೈಮ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ ಮತ್ತು ಆಸ್ಟ್ರಿಯದ ರಾಷ್ಟ್ರಪತಿ. ೧೯೨೧ - ಪಿ. ಎನ್. ಭಗವತಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ೧೯೩೨ - ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು.ಆರ್.ಅನಂತಮೂರ್ತಿ ೧೯೪೨ - ಹೂ ಜಿನ್ಟಾವ್, ಚೀನಿ ಜನ ಗಣರಾಜ್ಯದ ರಾಷ್ಟ್ರಪತಿ. == ಮರಣ == ೧೯೮೮ - ನಿಕೊಲಾಸ್ ಟಿನ್ಬೆರ್ಗೆನ್, ಜೀವಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ನೆದರ್ಲ್ಯಾಂಡ್ಸ್ನ ಪಕ್ಷಿಶಾಸ್ತ್ರ ತಜ್ಞ. ೨೦೦೩ - ಜಿ.ವಿ.ಅಯ್ಯರ್ == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ